Quotes worth a Million

Posts tagged ‘All India Radio News’

ಆಕಾಶವಾಣಿ – ವಾರ್ತೆಗಳು

While watching the news on TV today, was instantly reminded of the news that we would hear on Radio, mostly during the Pre TV days. Incidentally, the Radio news still continues to be broadcasted and is a source of information for many listeners even today.

I have just tried bringing out the style in which this news was read previously (not sure if the style continues even today) but keeping the current affairs in mind.

ನಮಸ್ಕಾರ

ಇದು ಆಕಾಶವಾಣಿ ಬೆಂಗಳೂರು ಕೇಂದ್ರದ ಸಹ ಪ್ರಸಾರ. ಈಗ ಕೇಳಿರಿ ಈ ರಾತ್ರಿ ೧೧:೦೦ ಘಂಟೆಯ ವಾರ್ತಾ ಪ್ರಸಾರ

ಓದುತ್ತಿರುವವರು ಜೈ ಕರ್ನಾಟಕ

ಮುಖ್ಯ ಸಮಾಚಾರಗಳೂ :

೧) ಕೇಂದ್ರ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಜೊತೆ ಚರ್ಚಿಸಲು ಸಿದ್ಧ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಎಸ್ ಎಂ ಕುರೇಶಿ ಇಂದು ಸ್ಪಷ್ಟ ಪಡಿಸಿದರು. ಇತ್ತೀಚೆಗೆ ನಡೆದ ವಿದೇಶಾಂಗ ಸಚಿವರುಗಳ ಮಾತುಕತೆಯಲ್ಲಿ ಉಂಟಾದ ವಾಗ್ವಾದಗಳ ಬಗ್ಗೆ ಕುರೇಶಿಯವರು ಹೇಳಿದ್ದು ಹೀಗೆ ‘ನಮ್ಮಿಬರಲ್ಲಿ ಏನು ವಾಗ್ವಾದ ನಡಿಯಲಿಲ್ಲ. ಅದು ಪತ್ರಕರ್ತರು ಹುಟ್ಟಿಸಿರುವ ಸುಳ್ಳು ವದಂತಿ ಎಂದು ಆರೋಪಿಸಿದರು
೨) ಗಣಿ ಧಣಿಗಳನ್ನು ಸರ್ಕಾರದಿಂದ ವಜಾ ಮಾಡುವಂತೆ ಆಗ್ರಹಿಸಿರುವ ವಿರೋಧ ಪಕ್ಷದೆದುರು ಮಣಿಯುವುದಿಲ್ಲ ಎಂದು ರಾಜ್ಯದ ಮುಖ್ಯ ಮಂತ್ರಿ ಬಿ ಎಸ್ ಏದೆಉರಿಯಪ್ಪ ನವರು ಇಂದು ಸುದ್ಧಿಗಾರರಿಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಆಚರ್ಯದ ಸಂಗಾತಿ ಏನಂದರೆ ಮುಖ್ಯ ಮಂತ್ರಿಯವರು ಈ ಮಾತನ್ನು ಕಣ್ಣೀರು ಸುರಿಸದೆ ತಿಳಿಸಿದರು
೩) ಗಣಿ ಹಗರಣಕ್ಕೆ ಸಂಭಂದಿಸಿದಂತೆ ರಾಜ್ಯದ ಕಾಂಗ್ರೆಸ್ ಪಕ್ಷ ಬೆಳ್ಳಾರಿ ಚಲೋ ಆಂದೋಲನ ಕೈ ಗೊಳ್ಳಲು ನಿರ್ಧರಿಸಿದೆ. ಸಿದ್ಧರಾಮಯ್ಯ ನವರು ನಾವು ಜನರಿಗಾಗಿ ಹೋರಾಡಲು ಯೆಂದಿಗು ‘ಸಿದ್ಧ’ ಎಂದು ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಸಂವಾದದ ವೇಳೆ ತಿಳಿಸಿದರು

ಈಗ ಕ್ರೀಡಾರಂಗದ ಸಮಾಚಾರಗಳೂ

ಭಾರತದ ವಿರುದ್ಧ ಇಂದು ಶುರುವಾದ ಗಲ್ಲೇ ಟೆಸ್ಟ್ ಮ್ಯಾಚ್ ನಲ್ಲಿ ಶ್ರೀ ಲಂಕಾ ಮೊದಲನೆಯ ದಿನದ ಆಟ ಮುಗಿದಾಗ ೨ ವಿಕೆಟ್ ನಷ್ಟಕ್ಕೆ ೨೫೬ ರನ್ಸ್ ಗಳಿಸಿದರು
ಶಾಹಿದ್ ಆಫ್ರಿದಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕನ ಪಟದಿಂದ ಕೆಳಗಿಳಿಯಲೂ ನಿರ್ಧರಿಸಿದ್ಧಾರೆ. ಅವರ ಬದಲು ಸಲ್ಮಾನ್ ಬಟ್ಟ್ ನಾಯಕರಾಗಿ ಆಯ್ಕೆಯಾಗಿದ್ದಾರೆ

ಈಗ ರಾಜ್ಯದ ಅವಮಾನ ಸರದಿ, ಕ್ಷಮಿಸಿ ಹವಾಮಾನ ವರದಿ

ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಮಳೆ ಮುಂದುವರೆದಿದೆ. ಇದರಿಂದ ಕರಾವಳಿ ಪ್ರದೇಶಗಳಲ್ಲಿ ಕಡಲ ಕೊರೆತ ಉಂಟಾಗಿದೆ. ಮೀನುಗಾರಿಕೆ, ಕಡಲ ಹಾಗು ಬಂದರು ಸಚಿವರು ಇಂದು ಕಡಲ ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಪರೀಕ್ಷೆ ನಡೆಸಿದರು. ಕಡಲ ಪ್ರದೇಶಗಳಲ್ಲಿ ಮಳೆ ಮುಂದುವರೆದಿರುವುದರಿಂದ, ಸರ್ಕಾರ ಮೀನುಗಾರಿಕೆ ಎಲ್ಲ ಚಟುವಟಿಕೆಗಳನ್ನು ಸ್ಥಗಿತ ಗೊಳಿಸಿದೆ ಹಾಗು ಮೀನುಗಾರರಿಗೆ ಎಚ್ಚರಿಕೆ ನೀಡಿದೆ.

ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿದ್ದು ಮಳೆ ಬರುವ ಎಲ್ಲ ಸಾಧ್ಯತೆಗಳಿವೆ. ಇಷ್ಟೇ ಸುದ್ಧಿ ಸ್ಪಷ್ಟ. ಬೇರೆ ಊರಿನ ಹವಾಮಾನ ಹೇಳುವುದು ಕಷ್ಟ. ಹೇಳದಿದಲ್ಲಿ ನಿಮಗೇನು ನಷ್ಟ? ನಗರದ ಗರಿಷ್ಟ ಉಷ್ಣಾಂಶ ೨೦ ಡಿಗ್ರಿ ಕನಿಷ್ಠ ೧೫ ಡಿಗ್ರಿ. ವಿಮಾನ ನಿಲ್ಧಾನ ದಲ್ಲಿ ಗರಿಷ್ಟ ಉಷ್ಣಾಂಶ ೨೨ ಡಿಗ್ರಿ ಕನಿಷ್ಠ ೧೭ ಡಿಗ್ರಿ.

ಇದರೊಂದಿಗೆ ನಮ್ಮ ಭಾನುವಾರ ರಾತ್ರಿಯ ಪ್ರಸಾರ ಮುಖ್ತಾಯಗೊಂಡಿದೆ.

ನಮ್ಮ ಮುಂದಿನ ಪ್ರಸಾರ ನಾಳೆ ಬೆಳಗ್ಗಿನ ಜಾವ ೦೫ ಘಂಟೆ ೫೫ ನಿಮಿಷಕ್ಕೆ ಶುರುವಾಗಲಿದೆ. ನಾಳೆ ಬೆಳಿಗ್ಗಿನ ನೇರ ಪ್ರಸಾರದೊಂದಿಗೆ ಮತ್ತೆ ಭೇಟಿಯಾಗೋಣ.

ಜೈ ಹಿಂದ್

Advertisements